ಉತ್ತಮ ದೊಡ್ಡಬಳ್ಳಾಪುರಕ್ಕಾಗಿ ಸ್ಮಾರ್ಟ್‌ ಆಡಳಿತ ವ್ಯವಸ್ಥೆ

ಸರಳವಾಗಿ ಹಕ್ಕುಗಳನ್ನು ಪಡೆಯಿರಿ!

ಸುಲಭವಾಗಿ ದೂರು ಸಲ್ಲಿಸಿ

ನಿಮ್ಮ ಫೋನ್‌ನಿಂದ ನೇರವಾಗಿ ನಾಗರಿಕ ಸಮಸ್ಯೆಗಳನ್ನು ವರದಿ ಮಾಡಿ - ಯಾವುದೇ ಕಾಗದಪತ್ರಗಳ ಜಂಜಾಟವಿಲ್ಲ, ವಿಳಂಬಗಳಿಲ್ಲ. ನಿಮ್ಮ ದೂರಿನ ಸ್ಥಿತಿಯನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಿ ಮತ್ತು ಪರಿಹಾರಗಳ ಕುರಿತು ಮಾಹಿತಿ ಪಡೆಯಿರಿ.

ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ

ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ ಹಾಗು ಅರ್ಜಿ ಸಲ್ಲಿಸಿ. ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗು ಅರ್ಜಿಯ ಸ್ಥಿತಿ ಕುರಿತು ಮಾಹಿತಿ ಪಡೆಯಿರಿ.

ದೊಡ್ಡಬಳ್ಳಾಪುರದ ಇತ್ತೀಚಿನ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯಿರಿ

ಸ್ಥಳೀಯ ಶಾಸಕರ ಕಚೇರಿಯಿಂದ ದೃಢೀಕೃರಿಸಿದ ಹಾಗು ಪರಿಶೀಲಿಸಿದ ಮಾಹಿತಿಗಳು, ಪ್ರಕಟಣೆಗಳು ಮತ್ತು ಸುದ್ದಿಗಳನ್ನು ಪಡೆಯಿರಿ. ನಿರಂತರ ಸಂಪರ್ಕದಲ್ಲಿರಿ

ಆಡಳಿತವನ್ನು ಸರಳ ಮತ್ತು ಪಾರದರ್ಶಕವಾಗಿಸುತ್ತಿದ್ದೇವೆ. .

ಸಮಯ ಹಾಗು ಶ್ರಮ ಉಳಿಸಿ

ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ, ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡಬೇಕಿಲ್ಲ. ನಿಮ್ಮ ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ, ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸಿ. ನಿರಂತರ ಮಾಹಿತಿ ಪಡೆದುಕೊಳ್ಳಿ.

ಪಾರದರ್ಶಕ & ಸರಳ

ನೀವು ಸಲ್ಲಿಸಿದ ಪ್ರತಿ ಅರ್ಜಿಯನ್ನೂ ದಾಖಲಿಸಲ್ಪಡುತ್ತದೆ ಹಾಗು ಟ್ರ್ಯಾಕ್‌ ಮಾಡಬಹುದಾಗಿದೆ. ಅರ್ಜಿಯ ಪ್ರಗತಿಯ ಕುರಿತಾಗಿ ಕ್ಷಣ-ಕ್ಷಣದ ಮಾಹಿತಿ ಲಭ್ಯ. ಪಾರದರ್ಶಕತೆಯೇ ನಮ್ಮ ಆದ್ಯತೆ. s.

ವೇಗದ & ಸ್ಮಾರ್ಟ್‌ ಆಡಳಿತ

ಸರ್ಕಾರದಿಂದ ಒದಗಿಸಲಾದ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳು, - ಶಿಕ್ಷಣ, ವಸತಿ ಮತ್ತು ಆರ್ಥಿಕ ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ಒಂದೇ ಅನುಕೂಲಕರ ವೇದಿಕೆಯಲ್ಲಿ ಪಡೆಯಿರಿ.

ಶಾಸಕರ ಕಚೇರಿಯೊಂದಿಗೆ ನೇರ ಸಂಪರ್ಕ e

ಈ ಅಪ್ಲಿಕೇಶನ್ ಮಾನ್ಯ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ನೇರ ಉಪಕ್ರಮವಾಗಿದೆ. ನಿಮ್ಮ ಧ್ವನಿಯನ್ನು ಸ್ಥಳೀಯ ನಾಯಕತ್ವವು ಕೇಳುವಂತೆ ಮತ್ತು ಅದರಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ.

ಯಾವಾಗಲೂ ಮಾಹಿತಿ ಪಡೆಯಿರಿ

ತುರ್ತು ಸೂಚನೆಗಳಿಂದ ಹಿಡಿದು ಹೊಸ ಅಭಿವೃದ್ಧಿ ಯೋಜನೆಗಳು ಮತ್ತು ನೂತನವಾಗಿ ಜಾರಿಯಾದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಿರಿ. ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗ ಬಗ್ಗೆ ತಿಳಿದುಕೊಳ್ಳಿ.

ಎಲ್ಲಾ ನಾಗರಿಕರಾಗಿ ರಚಿಸಲಾಗಿದೆ

ಹಿರಿಯರಾಗಿರಲಿ ಕಿರಿಯರಾಗಿರಲಿ, ತಂತ್ರಜ್ಞಾನ ಪರಿಣತರಾಗಿರಲಿ ಅಥವಾ ಇಲ್ಲದಿರಲಿ - ಈ ಅಪ್ಲಿಕೇಶನ್ ಸರಳವಾಗಿದ್ದು, ಬಳಕೆದಾರ ಸ್ನೇಹಿಯಾಗಿದೆ, ಎಲ್ಲರಿಗೂ ಸೇವೆ ಸಲ್ಲುವಂತೆ ಕನ್ನಡದಲ್ಲಿ ಲಭ್ಯವಿದೆ.

ಇತ್ತೀಚೆಗೆ ಕೇಳಲಾದ ಪ್ರಶ್ನೆಗಳು .

ಈ ಅಪ್ಲಿಕೇಶ್‌ ಅನ್ನು ಯಾರು ಬಳಸಬಹುದು ? ?

ಮಾನ್ಯ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಮಾರ್ಗದರ್ಶನದಂತೆ ಈ ಅಪ್ಲಿಕೇಶನ್ ನಿರ್ಮಾಣವಾಗಿದೆ. ಸ್ಥಳೀಯ ನಾಯಕರು ನಿಮ್ಮ ಧ್ವನಿಯನ್ನು ಕೇಳುವಂತಾಗಬೇಕು ಮತ್ತು ಅದರಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ.

ನಾನು ಯಾವ ರೀತಿಯ ದೂರುಗಳನ್ನು ಸಲ್ಲಿಸಬಹುದು ?

ನೀವು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿನ ರಸ್ತೆ, ಕಸ, ವಿದ್ಯುತ್‌, ಸಾರ್ವಜನಿಕ ಸುರಕ್ಷತೆ ಅಥವಾ ಇನ್ನಾವುದೇ ನಾಗರಿಕ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ.

ನನ್ನ ಅರ್ಜಿಯ ಸ್ಥಿತಿಯ ಕುರಿತು ಹೇಗೆ ಟ್ರ್ಯಾಕ್‌ ಮಾಡಬಹುದು ?

ಒಮ್ಮೆ ಅರ್ಜಿ ಸ್ವೀಕೃತವಾದ ನಂತರ, ಆ ಅರ್ಜಿಯ ಕುರಿತಾದ ನೈಜ ಸಮಯದ ಮಾಹಿತಿಯು ಅಪ್ಲಿಕೇಶನ್‌ ನಲ್ಲಿ ಲಭ್ಯವಿರುತ್ತದೆ. ನೀವು ಅಪ್ಲಿಕೇಶನ್‌ ನಲ್ಲಿ ಆ ಕುರಿತು ಮಾಹಿತಿ ಪಡೆಯಬಹುದಾಗಿದೆ.

ಈ ಅಪ್ಲಿಕೇಶನ್‌ ಕನ್ನಡದಲ್ಲಿ ಲಭ್ಯವಿದೆಯೇ ?

ಹೌದು, ಈ ಅಪ್ಲಿಕೇಶನ್‌ ಕನ್ನಡದಲ್ಲಿ ಲಭ್ಯವಿದೆ. ಆದ್ದರಿಂದ ಭಾಷೆಯ ಭೇದವಿಲ್ಲದೇ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ನಾನು ಸರ್ಕಾರಿ ಯೋಜನೆಗಳಿಗೆ ಹೇಗೆ ಅರ್ಜಿ ಸಲ್ಲಿಸಬಹುದು ?

ಅಪ್ಲಿಕೇಶನ್‌ ನಲ್ಲಿ "ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ" ಎಂಬ ಆಯ್ಕೆ ಲಭ್ಯವಿದ್ದು, ಅದನ್ನು ಕ್ಲಿಕ್‌ ಮಾಡಿ, ನಿಮ್ಮ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ ನಂತರ ಸಲ್ಲಿಸಿ ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ. ಪ್ರತೀ ಹಂತದಲ್ಲೂ ಈ ಅಪ್ಲಿಕೇಶನ್‌ ನಿಮಗೆ ಮಾರ್ಗದರ್ಶನ ನೀಡುತ್ತದೆ.

ನಾನು ಈ ಅಪ್ಲಿಕೇಶನ್‌ ಮೂಲಕ ಅಪ್ಡೇಟ್ಸ್‌ ಹಾಗೂ ಅಧಿಸೂಚನೆಗಳನ್ನು ಪಡೆಯಬಹುದೇ ?

ಹೌದು, ಈ ಅಪ್ಲಿಕೇಶನ್‌ ಮೂಲಕ ನೀವು ನಿಮ್ಮ ಶಾಸಕರ ಸ್ಥಳೀಯ ಕಾರ್ಯಕ್ರಮಗಳು, ಪ್ರಮುಖ ಪ್ರಕಟಣೆಗಳು ಹಾಗು ನವೀಕೃತ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಶಾಸಕರಾದ ಶ್ರೀ ಧೀರಜ್‌ ಮುನಿರಾಜ್‌ ಅವರ ಸಂದೇಶ

ಪ್ರತಿಯೊಬ್ಬ ನಾಗರಿಕರ ಸಬಲೀಕರಣ

ದೊಡ್ಡಬಳ್ಳಾಪುರದ ಪ್ರತಿಯೊಬ್ಬ ನಿವಾಸಿಯೂ ಸಬಲರಾಗಬೇಕು, ಅವರ ನೇರ ಧ್ವನಿಯಾಗಬೇಕು ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ತಮ್ಮ ದೂರುಗಳನ್ನು ಸಲ್ಲಿಸಲು ಹಾಗು ನಮ್ಮನ್ನು ಸಂಪರ್ಕಿಸಲು ಇದೊಂದು ನೇರ ವೇದಿಕೆಯಾಗಿದೆ.

ಆಡಳಿತವನ್ನು ಇನ್ನಷ್ಟು ಪಾರದರ್ಶಕವಾಗಿಸುವುದು

ಜನರು ತಮ್ಮ ದೂರುಗಳ ಪ್ರಗತಿ ಹಾಗು ಸ್ಥಿತಿಯನ್ನು ನೈಜ ಸಮಯದಲ್ಲಿ ಈ ಅಪ್ಲಿಕೇಶನ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ. ಪ್ರತಿ ಹಂತವೂ ಪಾರದರ್ಶಕವಾಗಿದೆ.

ವೇಗವಾದ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ಸೇವೆ

ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ನಾವು ಸೇವೆಯು ವಿಳಂಬವಾಗುದನ್ನು ಕಡಿಮೆ ಮಾಡುತ್ತಿದ್ದೇವೆ ಹಾಗು ಇಲಾಖೆಗಳು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಯಿಸಲು ಸುಲಭವಾಗುವಂತೆ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ.

ಸಾರ್ವಜನಿಕರೊಂದಿಗೆ ನಿರಂತರ & ನಿಕಟ ಸಂಪರ್ಕ e

ಪ್ರತಿಯೊಬ್ಬ ನಾಗರಿಕನೂ ನೈಜ ಸಮಯದಲ್ಲಿ ಮಾಹಿತಿ ಪಡೆದುಕೊಳ್ಳಬೇಕು, ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು ಎಂದು ಬಯಸುತ್ತೇನೆ. ಈ ಅಪ್ಲಿಕೇಶನ್‌ ನನ್ನ ಹಾಗು ಸಾರ್ವನಿಕರ ನಡುವಿನ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ.

ಅಪ್ಲಿಕೇಶನ್‌ ಕುರಿತು ಬಳಕೆದಾರರ ಅಭಿಪ್ರಾಯ ಹೀಗಿದೆ y.

“ಈ ಅಪ್ಲಿಕೇಶನ್ ಮುಖಾಂತರ grievances ಸುಲಭವಾಗಿ ಹಂಚಿಕೊಳ್ಳಬಹುದು. ನಮ್ಮ ದಾವಿಗೆ ದ್ರುತ ಪ್ರತಿಕ್ರಿಯೆ ದೊರೆಯುತ್ತಿದೆ.”

ಸೀತಾರಾಮ ಯೆನ್ನೂರ
Doddaballapura

“ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಈಗ ತುಂಬಾ ಸುಲಭವಾಗಿದೆ. ಧನ್ಯವಾದಗಳು ಮಾನ್ಯ MLA ದೀರ್ಝ ಮುನಿರಾಜ್ ಅವರಿಗೆ.”

ಸುಶ್ರೀ ಲಕ್ಷ್ಮೀ ನಾಯಕ್
Doddaballapura

“ನಮ್ಮ Doddaballapura ಕ್ಷೇತ್ರದ ಎಲ್ಲಾ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳುತ್ತೇನೆ. ತುಂಬಾ ಉಪಯುಕ್ತವಾಗಿದೆ.”

ರಘುನಾಥಪ್ಪ ಬಿ.ಎಸ್
Doddaballapura

“ಈ ಅಪ್ಲಿಕೇಶನ್ ಇದ್ದರಿಂದ ಸ್ಥಳೀಯ ಸಮಸ್ಯೆಗಳ ಪರಿಹಾರ ದ್ರುತಗತಿಯಲ್ಲಿ ನಡೆಯುತ್ತಿದೆ. ನಮ್ಮ ವೋಟ್ ಅತ್ಯಂತ ಪರಿಣಾಮಕಾರಿಯಾಗಿದೆ”

ಗೀತಾ ಹೆಗಡೆ
Doddaballapura

“MLA ಅವರಿಗೆ ನೇರವಾಗಿ ಸಂಪರ್ಕಿಸಬಹುದಾದ ಈ ಅಪ್ಲಿಕೇಶನ್ ನಿಂದ ನಮ್ಮ ಶೈಲಿ ಸರಕಾರದತ್ತ ನಂಬಿಕೆ ಹೆಚ್ಚಾಗಿದೆ.”

ಶ್ರೀನಿವಾಸ ಮುಳಗಿ
Doddaballapura

30k downloads and counting onwards.

ಉಚಿತವಾಗಿ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ